ಧೂಪ ಎಣ್ಣೆಯನ್ನು ಧೂಪ ಮರದ ಬೀಜದಿಂದ ತೆಗೆಯಲಾಗುತ್ತದೆ. ಧೂಪ ಮರವನ್ನು ಇನ್ ಸಾಲ್ ಧೂಪ, (), ದಾಮರ್ () ಎಂದೂ ಕರೆಯುತ್ತಾರೆ. ಧೂಪಮರ ಡಿಪ್ಟೆರೊಕಾರ್ಪೆಸಿ ( ) ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತ್ರ ಹೆಸರು ವೆಟೆರಿಯ ಇಂಡಿಕ( ). === ಭಾರತ ಭಾಷೆಗಳಲ್ಲಿ ಧೂಪ ಮರದ ಸಾಧಾರಣ ಹೆಸರು === ಸಂಸ್ಕೃತ=ಧೂಪ(),ಕುಂದುರ() ಅಜಕರ್ಣ() ಹಿಂದಿ=ಖರುಬ(),ಸಫೇಡ್ ದಮರ್( ),ಸುಂದ್ರಾಸ್(),() ತೆಲುಗು=ಧೂಪ() ತಮಿಳು=ಧೂಪ ಮರಮ್( ),, ಮಲಯಾಳಂ= , , === ಭಾರತ ದೇಶದಲ್ಲಿ ಬೆಳೆಯುವ ಪ್ರಾಂತಗಳು === ಕರ್ನಾಟಕ ದಿಂದ ಕೇರಳ ದವರೆಗೆ ಇರುವ ಪಶ್ಚಿಮ ದಿಕ್ಕಿನ ಕಣಿವೆ, ಪರ್ವತಪಾದ ಪ್ರಾಂತ್ಯಗಳಲ್ಲಿ ಬೆಳೆಯುತ್ತವೆ. . ಇನ್ನೂ ಪಶ್ಚಿಮ ತೀರ ಪ್ರಾಂತ್ಯದ ಉದ್ದಕ್ಕೂ ಕುರುಂಬು (ಎತ್ತರದಲ್ಲಿನ ವಿಸ್ತಾರವಾದ ಚಪ್ಪಟೆ ಭೂಮಿ), ೬೦-೧೨೨೦ ಅಡಿ ಎತ್ತರದಲ್ಲಿರುವ ಗುಟ್ಟೆ ಪ್ರಾಂತ್ಯದಲ್ಲಿ ಕಂಡು ಬರುತ್ತದೆ. ಇನ್ನೂ ಮಹಾರಾಷ್ಟ್ರ, ಒಡಿಶಾ ಪ್ರಾಂತ್ಯಗಳಲ್ಲಿ ಬೆಳೆಯುತ್ತಾರೆ . ವಿದೇಶಗಳಲ್ಲಿ ವೆಸ್ಟ್ ವಿಂಡಿಸ್ ದ್ವೀಪ ಪ್ರಾಂತ್ಯ ದಲ್ಲಿಯು ಕಂಡು ಬರುತ್ತದೆ. ಬೆಳವಣಿಗೆಗೆ ಬೇಕಾಗಿರುವ ಅನುಕೂಲವಾದ ಉಷ್ಣೋಗ್ರತೆ ಗರಿಷ್ಠವಾಗಿ ೩೫-೩೮ ೦< /> , ಕನಿಷ್ಠವಾಗಿ ೧೨.೨-೧೮೦C ಇರಬೇಕು. ಮಳೆ ೨೦೦ ಮಿ.ಮೀ.ರಿಂದ ೫೦೦ ಮಿ.ಮೀ.ಗಳು ಇರಬೇಕು. == ಮರ == ಧೂಪದ ಮರವನ್ನು ಇಂಡಿಯನ್ ಕೊಪಲ್ ( ) ಮರ ಎಂದು ಕರೆಯಲಾಗುತ್ತದೆ. ಇದು ದೊಡ್ಡ ಗಾತ್ರದ, ಸುಂದರವಾದ ನಿತ್ಯ ಹರಿದ್ವರ್ಣದ ಮರ. ೧೫ ಮೀಟರುಗಳಿಗಿಂತ ಹೆಚ್ಚಾಗಿ ಬೆಳೆಯುತ್ತದೆ. ಈ ಮರಮುಟ್ಟನ್ನು ಬೆಂಕಿಪೆಟ್ಟಿಗೆ, ಪದರಹಲಿಗೆ() ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಎಲೆಗಳು ಔಷಧ ಗುಣಗಳನ್ನು ಹೊಂದಿವೆ. ಮರದ ತೊಗಟೆಯನ್ನು ಗರ್() ಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ. ಮರದ ಅಂಟು/ರಾಳ()ವನ್ನು ವಾರ್ನಿಷ್, ಮೇಣದ ಬತ್ತಿ, ಹಚ್ಚು ಮದ್ದು ತಯಾರಿಕೆಯಲ್ಲಿ ಬಳಸಲ್ಪಡುತ್ತದೆ. == ಹಣ್ಣು-ವಿತ್ತನ == ಹೂಗಳು ವಿಕಸಿಸುವ ಸಮಯ ಜನವರಿ-ಮಾರ್ಚಿ ತಿಂಗಳುಗಳು. ಪುಷ್ಪಗಳು ಬೆಳ್ಳಗೆ ಪರಿಮಳ ಭರಿತವಾಗಿರುತ್ತವೆ. ಹಣ್ಣು ಮೇ-ಜುಲೈ ತಿಂಗಳುಗಳಲ್ಲಿ ಪಕ್ವಕ್ಕೆ ಬರುತ್ತವೆ. ಹಣ್ಣು ದಪ್ಪಗಿದ್ದು, ನಿಡುನಾಲ್ಮೂಲೆ ಆಗಿ ಇಲ್ಲವೆ ಗೋಲಾಕಾರವಾಗಿ, ಭರಣಿ ರೂಪದಲ್ಲಿ ಇರುತ್ತದೆ. ಹಣ್ಣು ನೋಡುವುದಕ್ಕೆ ಸಪೋಟ ಹಣ್ಣಿನ ತರಹ ಕಂಡು ಬರುತ್ತದೆ. ಹಣ್ಣು ಪರಿಮಾಣ 6X4 ಸೆಂ.ಮೀ. ಒಂದು ಮರದಿಂದ ೪೦೦-೫೦೦ಕಿಲೋಗಳ ಹಣ್ಣು ಉತ್ಪನ್ನವಾಗುತ್ತದೆ. ಹಣ್ಣಿನಲ್ಲಿ ಬೀಜಗಳು ೪೭% ಇರುತ್ತದೆ. ಹಣ್ಣು ಪಕ್ವವಾದಾಗ ಕಂದು ಬಣ್ಣ ಹೊಂದಿರುತ್ತದೆ. ಬೀಜಗಳಲ್ಲಿ ತೇವ ಹೆಚ್ಚಿನ ಶೇಕಡದಲ್ಲಿ ಇರುತ್ತದೆ. ಬೀಜಗಳ ತೇವ ಪ್ರತಿಶತ ೫-೬ % ಬರೋವರೆಗೆ ಚೆನ್ನಾಗಿ ಒಣಗಿಸಬೇಕು. ಬೀಜಗಳಲ್ಲಿ ೧೯-೨೩%ವರಗೆ ಎಣ್ಣೆ /ಕೊಬ್ಬು ಇರುತ್ತದೆ. ಕರ್ನಾಟಕ ರಾಜ್ಯದಲ್ಲಿ ೫ ಸಾವಿರ, ಕೇರಳದಲ್ಲಿ ೭ ಸಾವಿರ ಟನ್ನು ಬೀಜಗಳನ್ನು ಶೇಖರಣೆ ಮಾಡುವುದಕ್ಕೆ ಅವಕಾಶವಿದೆ. == ಬೀಜಗಳ ಶೇಖರಣೆ/ಉತ್ಪಾದನೆ == ವೊದಲು ಶೇಖರಣೆ ಮಾಡಿದ ಬೀಜಗಳನ್ನು ಬಯಲು ಪ್ರದೇಶದಲ್ಲಿ ಬಿಸಿಲಿನಲ್ಲಿ ಒಣಗಿಸಿ, ಬೀಜಗಳಲ್ಲಿರುವ ತೇವ ೫-೬% ಬರುವ ತನಕ ಒಣಗಿಸಬೇಕು. ಒಣಗಿದ ಬೀಜಗಳನ್ನು ಗಾಣ, ಎಕ್ಸುಪೆಲ್ಲರು ಯಂತ್ರಗಳಲ್ಲಿ ನುಗ್ಗಿಸಿ ಎಣ್ಣೆಯನ್ನು ಸಂಗ್ರಹಣೆ ಮಾಡಲಾಗುತ್ತದೆ. ಗಾಣ,ರೋಟರಿ ಮತ್ತು ಎಕ್ಸುಪೆಲ್ಲರು ಯಂತ್ರಗಳಲ್ಲಿ ನಡೆಸಿ ಎಣ್ಣೆ ತೆಗೆದ ಮೇಲೆ ಬರುವ ಹಿಂಡಿ ಯಲ್ಲಿ ೬-೧೦% ವರೆಗೆ ಇನ್ನೂ ಎಣ್ಣೆ ಉಳಿದಿರುತ್ತದೆ. ಅದನ್ನು ಸಾಲ್ವೆಂಟ್ ಪ್ಲಾಂಟಲ್ಲಿ ತೆಗೆಯುತ್ತಾರೆ. ಎಕ್ಸುಪೆಲ್ಲರುನಲ್ಲಿ ನಡೆಸಿದಾಗ ಎಣ್ಣೆ ೭-೮% ಉತ್ಪನ್ನವಾಗುತ್ತದೆ, ಉಳಿದಿದ್ದು ಹಿಂಡಿಯಲ್ಲಿ ಇರುತ್ತದೆ. === ಎಣ್ಣೆ === ಧೂಪ ಎಣ್ಣೆ ನೀಲಿ ಬಣ್ಣದಿಂದ ಇದ್ದು ಅರಿಶಿನ ವರ್ಣದಲ್ಲಿರುತ್ತದೆ, ಪರಿಮಳಯುಕ್ತವಾಗಿರುತ್ತದೆ. ಎಣ್ಣೆಯಲ್ಲಿ ೫೦-೫೫% ವರೆಗೆ ಸಂತೃಪ ಕೊಬ್ಬಿನ ಆಮ್ಲಗಳಿರುತ್ತವೆ. ಸ್ಟಿಯರಿಕ್ ಆಮ್ಲ ೩೮.೦-೪೫%, ಮತ್ತು ಪಾಮಿಟಿಕ್ ಆಮ್ಲ ೧೦-೧೩% ತನಕ ಇರುತ್ತವೆ. ಸಂತೃಪ್ತ ಕೊಬ್ಬಿನ ಆಮ್ಲಗಳು ಇದ್ದ ಕಾರಣ, ಧೂಪದ ಎಣ್ಣೆ ಕಡಿಮೆ ಉಷ್ಣೋಗ್ರತೆಯಲ್ಲಿ ಘನರೂಪದಲ್ಲಿ ಇರುತ್ತದೆ. ಅದರಿಂದ ಧೂಪ, ಎಣ್ಣೆಯನ್ನು ಧೂಪದ ಕೊಬ್ಬು ಎಂದು ಕರೆಯಲಾಗುತ್ತದೆ. ಧೂಪ ಎಣ್ಣೆಯಲ್ಲಿ ಏಕ ದ್ವಿಬಂಧವುಳ್ಳ ಒಲಿಕ್ ಆಮ್ಲ ೪೨.೦-೫೦.೦ ವರೆಗೆ ಇರುತ್ತದೆ. ಮೂರು ದ್ವಿಬಂಧಗಳಿರುವ ಲಿನೊಲೆನಿಕ್ ಕೊಬ್ಬಿನ ಆಮ್ಲ೦.೫% ವರೆಗೆ ಗೊಚರಿಸುತ್ತದೆ.. ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ ಎಣ್ಣೆ-ಭೌತಿಕ ಧರ್ಮಗಳು === ಎಣ್ಣೆ ಉಪಯೋಗಗಳು === ರಿಫೈಂಡ್ ಮಾಡಿದ ಎಣ್ಣೆ ಆಹಾರಯೋಗ್ಯ, ಕೊಕೊ ಬಟ್ಟರುಗೆ ಬದಲಾಗಿ ಉಪಯೋಗಿಸಲಾಗುತ್ತದೆ .ಟಾಯ್ಲೆಟ್ ಸಾಬೂನ್, ಮೇಣದ ಬತ್ತಿ ಮಾಡುವುದಕ್ಕೆ ಉಪಯೋಗಿಸಬಹುದು. ಸೌಂದರ್ಯಲೇಪನ, ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ . == ಚಿತ್ರಶಾಲೆ == === ಉಲ್ಲೇಖನಗಳು ===